Index   ವಚನ - 76    Search  
 
ಲಿಂಗ ಪ್ರಾಣವಾದಲ್ಲಿ ಜಾಗ್ರ ಸ್ವಪ್ನ ಸುಷಪ್ತಿಯಲ್ಲಿ ಉಭಯಭ್ರಾಂತಿಲ್ಲದೆ ದೃಷ್ಟದಲ್ಲಿ ಕಂಡುದಕ್ಕೆ ಆ ಜ್ಞಾನದಲ್ಲಿ ಭಾವಿಸುವುದಕ್ಕೆ ಆ ಜ್ಞಾನ ಉಭಯದೋರದೆ ಸ್ವಯವಾದುದು. ಉಭಯಗುಣ ನಾಸ್ತಿ ಪ್ರಾಣಲಿಂಗ ಸಂಬಂಧ ಕಾಲಾಂತಕ ಭೀಮೇಶ್ವರಲಿಂಗದಲ್ಲಿ.