Index   ವಚನ - 77    Search  
 
ಲೇಸೆನಿಸುವ ವಸ್ತುವ ಬೈತಿಡುವುದಕ್ಕೊಂದಾಶ್ರಯ ಬೇಕು. ಮನ ಘನವನಾಶ್ರಯಿಸುವುದಕ್ಕೆ, ಅನುವನರಿದು ನೆಮ್ಮುವುದಕ್ಕೆ, ಚಿದ್ಘನಲಿಂಗವೆಂಬ ಕುರುಹು ಬೇಕು. ಇದರಿಂದ ಬೇರೆ ಕಾಬ ಅರಿವಿಲ್ಲ. ಆ ಕುರುಹೆ ಅರಿವಿಗೆ ಆಶ್ರಯವಾದ ಕಾರಣ, ಕಾಲಾಂತಕ ಭೀಮೇಶ್ವರಲಿಂಗವು ಕುರುಹುಗೊಂಡಿತ್ತು.