Index   ವಚನ - 81    Search  
 
ಶ್ವೇತಾಂಗ ಬಹುವರ್ಣವ ಬೆರಸಿದಂತೆ ಆತ್ಮನೊಂದಾಗಿ ಪ್ರಕೃತಿ ಹಲವ ಧರಿಸಿದಂತೆ ತಾ ಬಂದ ಗುಣವನರಿದು, ಇದ್ದ ಇರವಿನ ಸದ್ವರ್ತನೆಯಿಲ್ಲದೆ ಆಚರಣೆಗೆ ಅನುಸರಣೆಯಿಲ್ಲದೆ ಅರಿವನರಿದು ಅಮಂಗಲಕ್ಕೊಳಗಾಗದೆ ನಿರ್ಮಲತರಂಗವನೆಯ್ದಿ ಸಂದುದು ಕಾಲಾಂತಕ ಭೀಮೇಶ್ವರಲಿಂಗದಂಗ.