Index   ವಚನ - 82    Search  
 
ಷಡುಸ್ಥಲದಲ್ಲಿ ಕಂಡೆಹೆನೆಂದಡೆ ಕ್ರೀ ಶುದ್ಧತೆಯಿಲ್ಲ. ತ್ರಿವಿಧ ಸ್ಥಲದಲ್ಲಿ ಕಂಡೆಹೆನೆಂದಡೆ ಭಾವಶುದ್ಧವಿಲ್ಲ. ಇದು ಮೀರಿ ಬೇರೊಂದನರಿದೆಹೆನೆಂದಡೆ ಆರರಿವಿಂಗೆ ಕುರುಹಿಲ್ಲ. ಈ ತೆರನನರಿದಡೆ ಅರಿವು ಕುರುಹು ಏಕವಾಯಿತ್ತು ಕಾಲಾಂತಕ ಭೀಮೇಶ್ವರಲಿಂಗವನರಿಯಲಾಗಿ.