ಸಕಲ ಸ್ಥಾವರ ಸಕಲ ಬುದ್ಬುದಂಗಳಲ್ಲಿ
ಸಕಲ ಚರಾದಿಗಳಲ್ಲಿ, ಸಕಲ ಅಂಡಪಿಂಡಗಳಲ್ಲಿ
ತೋರುವ ತೋರಿಕೆ, ಕಾಣದ
ಅಚ್ಚರಿಯ ಕಂಡೆ ಕಾಣೆನೆಂಬುದು ಒಂದೆ ಭಾವ.
ಆ ಭಾವದ ಭ್ರಮೆಯಡಗಿ ಇಷ್ಟಲಿಂಗದಲ್ಲಿ ಅರ್ಚನೆ ಪೂಜನೆ
ಭಾವಲಿಂಗದಲ್ಲಿ ಭ್ರಮೆಯಡಗಿ
ಉಭಯಕ್ಕೆ ಠಾವಿಲ್ಲದೆ ತಲೆದೋರದೆ ನಿಂದುದು
ಕಾಲಾಂತಕ ಭೀಮೇಶ್ವರಲಿಂಗವೆಂಬುದಕ್ಕೆ
ಪ್ರಮಾಣವಾಯಿತ್ತು.
Art
Manuscript
Music
Courtesy:
Transliteration
Sakala sthāvara sakala budbudaṅgaḷalli
sakala carādigaḷalli, sakala aṇḍapiṇḍagaḷalli
tōruva tōrike, kāṇada
accariya kaṇḍe kāṇenembudu onde bhāva.
Ā bhāvada bhrameyaḍagi iṣṭaliṅgadalli arcane pūjane
bhāvaliṅgadalli bhrameyaḍagi
ubhayakke ṭhāvillade taledōrade nindudu
kālāntaka bhīmēśvaraliṅgavembudakke
pramāṇavāyittu.