ಸಂಜೀವನದ ನೆಳಲಲ್ಲಿ ನಿಲಲಾಗಿ
ಅಂಗದ ಆಪ್ಯಾಯನವರತಂತೆ
ಸಿದ್ಧರಸದಲ್ಲಿ ಪ್ರಸಿದ್ಧರಸ ಕೂಡೆ
ಅದ ಹೊದ್ದಿಹ ಗುಣವೆಲ್ಲವು ಹೇಮವಾದಂತೆ
ಮಾಡುವ ಮಾಟ ನಿಜವಾಗಿ, ಪೂಜಿಸುವ ದೃಷ್ಟವಾಗಿ,
ಸಂಗಂಧದ ಮಂದಿರದಲ್ಲಿ ಸಂಧಿಸಿದಂತೆ
ಉಭಯ ಭಾವಕ್ಕೆ ಮಾಟಕೂಟಕ್ಕೆ ಚಿತ್ತಕ್ಕೆ ಭಿನ್ನವಿಲ್ಲದೆ ನಿಂದುದು
ಕಾಲಾಂತಕ ಭೀಮೇಶ್ವರಲಿಂಗವ ಸಲೆ ಸಂದಿಲ್ಲದೆ
ಅರಿದುದು.
Art
Manuscript
Music
Courtesy:
Transliteration
San̄jīvanada neḷalalli nilalāgi
aṅgada āpyāyanavaratante
sid'dharasadalli prasid'dharasa kūḍe
ada hoddiha guṇavellavu hēmavādante
māḍuva māṭa nijavāgi, pūjisuva dr̥ṣṭavāgi,
saṅgandhada mandiradalli sandhisidante
ubhaya bhāvakke māṭakūṭakke cittakke bhinnavillade nindudu
kālāntaka bhīmēśvaraliṅgava sale sandillade
aridudu.