ಸರವಿ ಮಚ್ಚಿದ ವಾಯುಪೋಷನ ಇರವಿನಂತೆ,
ಗುಮತಿಯಲ್ಲಿದ್ದ ಅಸಿಯ ಮರೆಯಂತೆ,
ಬೇರಿನ ಮರೆಯಲ್ಲಿದ್ದ ವಿಷನಾಭಿಯಂತೆ,
ನೋಡಿದಡೆ ಭಕ್ತನಾಗಿ, ಒಳಹೊಕ್ಕು ವಿಚಾರಿಸಿದಲ್ಲಿ ಭವಿಯಾಗಿ,
ಸುಣ್ಣದ ಮಣ್ಣಿನಂತೆ, ಅಹಿ ಫಳದ ರೇಖೆಯಂತೆ,
ಕಪಟಕ್ಕೊಳಗಾಗಿ ಇಪ್ಪುದು ಭಕ್ತಿಸ್ಥಲವೆ?
ಮಧುರ ಚೂರ್ಣದಂತೆ ತನ್ಮಯವಾಗಿಪ್ಪುದೆ ಸದ್ಭಕ್ತನಿರವು,
ಕಾಲಾಂತಕ ಭೀಮೇಶ್ವರಲಿಂಗದ ನಿಜ ತತ್ವವಾಸ.
Art
Manuscript
Music
Courtesy:
Transliteration
Saravi maccida vāyupōṣana iravinante,
gumatiyallidda asiya mareyante,
bērina mareyallidda viṣanābhiyante,
nōḍidaḍe bhaktanāgi, oḷahokku vicārisidalli bhaviyāgi,
suṇṇada maṇṇinante, ahi phaḷada rēkheyante,
kapaṭakkoḷagāgi ippudu bhaktisthalave?
Madhura cūrṇadante tanmayavāgippude sadbhaktaniravu,
kālāntaka bhīmēśvaraliṅgada nija tatvavāsa.