Index   ವಚನ - 87    Search  
 
ಸ್ಥೂಲ ಸೂಕ್ಷ್ಮ ಕಾರಣಮಯಂಗಳಲ್ಲಿ, ಇಷ್ಟ ಪ್ರಾಣ ಭಾವಂಗಳಲ್ಲಿ, ಉಚಿತವನರಿದು ಕೂಡುವುದೆ ಯೋಗ. ಆ ಯೋಗವ ಪ್ರಯೋಗಿಸಿ ನಿಂದುದೆ ಕಾಲಾಂತಕ ಭೀಮೇಶ್ವರಲಿಂಗವು ಉಭಯವನಳಿದ ಭಾವ.