•  
  •  
  •  
  •  
Index   ವಚನ - 604    Search  
 
ತನ್ನರಿದವಂಗೆ ಇದಿರೆಂಬುದಿಲ್ಲ, ತನ್ನರಿಯದವಂಗೆ ಇದಿರೆಂಬುದುಂಟು. ಅರುಹು ಮರಹು ಕುರುಹಳಿಯಿತ್ತು, ಬೆರಗಾಯಿತ್ತು. ಬೆರಗು ಬೆರಗಿನೊಳಗೆ ಕರಿಗೊಂಡಿತ್ತು ಇದೇನೊ? ಭ್ರಾಂತು ಭ್ರಾಂತನೆ ನುಂಗಿ ಗುಹೇಶ್ವರ ಭವಿಯ ಬೆಂಬತ್ತಿ ಭವಿಯಾದ ಕಾರಣ.
Transliteration Tannaridavaṅge idirembudilla, tannariyadavaṅge idirembuduṇṭu. Aruhu marahu kuruhaḷiyittu, beragāyittu. Beragu beraginoḷage karigoṇḍittu idēno? Bhrāntu bhrāntane nuṅgi guhēśvara bhaviya bembatti bhaviyāda kāraṇa.
Hindi Translation अपने को जाननेवाले का विरोधि नहीं। अपने को न जाननेवाले का विरोधि है। ज्ञान अज्ञान चिह्न नाश हुआ, आश्चर्य हुआ। आश्चर्य आश्चर्य से मिला यह क्या है? भ्रांत भ्रांत निगलकर गुहेश्वरा भवि का पीछा कर भवि बनने का कारण। Translated by: Eswara Sharma M and Govindarao B N
Tamil Translation தன்னையறிந்தோனுக்குப் புறம்பானது எதுவுமில்லை, தன்னையறியாதோனுக்குப் புறமென்பதுண்டு. பொருள்ஞானம், மறதி, தென்படும் இலிங்கம் எல்லாம் அகன்றன. வியப்பு ஏற்பட்டது வியப்பு, வியப்பினுள்ளே ஒருமித்தது அறிபவன் அறியப்படுபவனை விழுங்கி மருள் மருளையே விழுங்கி குஹேசுவரா, சின்னமற்றதைச் சார்ந்து சின்னமற்றவனானான் Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿದವನು = ಅನುಭವತಹ ಅರಿತವನು, ಸಾಕ್ಷಾತ್ಕರಿಸಿಕೊಂಡವನು; ಅರುಹು = ವಸ್ತುಜ್ಞಾನ; ಇದಿರು = ತನಗೆ ಭಿನ್ನವಾಗಿ ತೋರುವ ವಿಶ್ವ ಹಾಗೂ ಕುರುಹಾದ ಲಿಂಗ; ಕರಿಗೊಳ್ಳು = ಒಂದಾಗು, ಬೆರೆತು ಘನೀಭೂತವಾಗು; ಕುರುಹು = ದೃಶ್ಯಲಿಂಗ; ತನ್ನನು = ತನ್ನ ನಿಜಸ್ವರೂಪವನ್ನು; ಬೆರಗು = ವಿಸ್ಮಯ, ಆತ್ಮ, ಶರಣ; ಬೆರಗು = ಪರಮಾತ್ಮ, ಚಿದ್ಘನಲಿಂಗ; ಭವಿ = ಕುರುಹು ಇಲ್ಲದವ, ಆತ್ಮ-ಪರಮಾತ್ಮ; ಭ್ರಾಂತು = ಅರಿಯುವವನಾದ ಜ್ಞಾತೃ, ಜೀವಾತ್ಮ; ಭ್ರಾಂತು = ಅರುಹಿಸಿಕೊಳ್ಳುವ ಜ್ಞೇಯ, ಲಿಂಗ; ಮರುಹು = ವಸ್ತುವಿನ ಅಜ್ಞಾನ; Written by: Sri Siddeswara Swamiji, Vijayapura