•  
  •  
  •  
  •  
Index   ವಚನ - 605    Search  
 
ಕೆಂಡದ ಗಿರಿಯ ಮೇಲೊಂದು, ಅರಗಿನ ಕಂಬವಿದ್ದಿತ್ತು ನೋಡಯ್ಯಾ. ಅರಗಿನ ಕಂಬದ ಮೇಲೆ ಹಂಸೆಯಿದ್ದಿತ್ತು. ಕಂಭ ಬೆಂದಿತ್ತು ಹಂಸೆ ಹಾರಿತ್ತು ಕೆಂಡ ಎತ್ತಲಡಗಿತ್ತು ಗುಹೇಶ್ವರಾ.
Transliteration Keṇḍada giriya mēlondu, aragina kambaviddittu nōḍayyā. Aragina kambada mēle hanseyiddittu. Kambha bendittu hanse hārittu keṇḍa ettalaḍagittu guhēśvarā.
Music Courtesy:
English Translation 2 On a mound of live coal I saw A waxen pillar stand! And on the pillar of wax I saw A swan. Let the pillar but burn, the swan takes wing: Where did the live coal disappear, O Guhōsvara?
Hindi Translation अंगार पर्वत पर एक लाक्षा खंब रहा था देखो अय्या । लाक्षा खंब पर एक हंस था। खंब जलने से हंस उड गया गुहेश्वरा । Translated by: Eswara Sharma M and Govindarao B N
Tamil Translation தணல் மலையின் மீது ஒரு அரக்குக் கம்பமிருந்தது. காணாய்! அரக்குக் கம்பத்தின் மீது ஒரு அன்னம் இருந்தது, கம்பம் வெந்து அன்னம் பறந்தது குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಗಿನ ಕಂಬ = ಅತ್ಯಂತ ಸೂಕ್ಷಮವಾದ ಭಾವಸ್ತಂಭ, ಶಿವೋsಹಂ ಎಂಬ ಅತ್ಯುನ್ನತ ಪ್ರಜ್ಞೆ; ಕೆಂಡದ ಗಿರಿ = ಜ್ಞಾನಪರ್ವತ, ಮಹಾಜ್ಞಾನ; ಬೇಯು = ಕರಗು; ಹಂಸ = ಜೀವಹಂಸ, ಶರಣ; ಹಾರು = ಬಯಲ ಸೇರು; Written by: Sri Siddeswara Swamiji, Vijayapura