Index   ವಚನ - 43    Search  
 
ತ್ರಿವಿಧವ ಮಲವೆಂದರಿತು ತನ್ನ ಸುಖಕ್ಕೋಸ್ಕರವಾಗಿ ವಸ್ತುವಿನಿಂದ ನಿರ್ಮಲವಾಯಿತ್ತೆಂದು ಮುಟ್ಟಬಹುದೆ? ಲಿಂಗಭೋಗೋಪಭೋಗಂಗಳೆಂದು ಬಿಟ್ಟ ನಿರ್ಮಾಲ್ಯವನರ್ಪಿಸಬಹುದೆ? ಇಂತಿವನರಿದು ಅರ್ಪಿಸುವಲ್ಲಿ ಸಲ್ಲದೆಂಬುದ ತಾನರಿತು ಮತ್ತೆ ಸಲುವುದೆಂಬಲ್ಲಿ ಅನರ್ಪಿತ ಅರ್ಪಿತವುಂಟೆ? ಇಂತಿವ ದೃಷ್ಟದಿಂದ ಲಕ್ಷಿತನಾಗಿ ಮುಟ್ಟುವ ತೆರನ ನೀವೆ ಬಲ್ಲಿರಿ ನಾವರಿಯೆವು. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ ಬಲ್ಲ.