ಧರೆ ಜಲ ಅನಲ ಅನಿಲ ಇವು ಮುಂತಾದುವಕ್ಕೆ
ಅಳಿವುದಕ್ಕೆ ಉಳಿವುದಕ್ಕೆ ಆತ್ಮಭೇದವಾವುದು?
ಶ್ರುತಿ ಮುಂತಾದ ತರ್ಕಂಗಳಿಂದ ಹೊತ್ತು ಹೋರಿಹೆನೆಂದಡೆ
ರಥದ ಕೀಲಿನಂತೆ ಮಾತಿಗೆ ಮಾತುಂಟು.
ಪೃಥ್ವಿಯ ಮೇಲಣ ನದಿ ತಟಾಕ ಅಪ್ಪುಮಯವೆಲ್ಲವು
ಸಿಂಧುವಿನ ತಪ್ಪಲಿಗೆ ಎಯ್ದುವಂತೆ ಇದು ವಸ್ತುಮಯದ ಹಾಹೆ.
ಈ ಗುಣ ಏಕವಸ್ತುವಿನ ನಿಜ.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾ
ಎಂಬ ಮುಂಡಿಗೆ.