Index   ವಚನ - 53    Search  
 
ನಾನಾ ಶಬ್ದಸೂತ್ರ ಲಕ್ಷಣಂಗಳಲ್ಲಿ ನ್ಯೂನಾಧಿಕವಿಲ್ಲದಂತೆ ವಚನಂಗಳ ರಚನೆಗಳಲ್ಲಿ ನಿರ್ವಚನ ಕಾರಣನಾಗಿ ಸರ್ವಗುಣಸಂಪನ್ನನಾಗಿರ್ದದಲ್ಲಿ ಭೂತಹಿತವನರಿತು ಆತ್ಮಚಿತ್ತವ ಮರೆದು ಶರಣ ಸಂಭಾಷಣೆಯಲ್ಲಿ ಶಿವಮೂರ್ತಿಧ್ಯಾನಂಗಳಲ್ಲಿ ಶಿವಕಥನ [ಯಥಾ ಕಥನ] ಪ್ರಸಂಗಳಲ್ಲಿ ಶಿವಪೂಜಾ ಮೂರ್ತಿಧ್ಯಾನಂಗಳಲ್ಲಿ ಉಭಯವಳಿದು ಏಕವಾಗಿ ಸ್ವೀಕರಿಸಿದಲ್ಲಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವ ಅವಧರಿಸಿದ ಅಂಗ.