Index   ವಚನ - 55    Search  
 
ಪರುಷರಸ ಸೋಂಕಿದಲ್ಲಿ ಲೋಹಕ್ಕಿದಿರೆಡೆ ಉಂಟೆ? ಸಿಂಧುವೊಳಕೊಂಡ ದ್ರವ್ಯಕ್ಕೆ ಋತುಕಾಲ ವೈಶಾಖಮಾಸಂಗಳಲ್ಲಿ ಜಲವಿಂಗಲು ಮತ್ತೆ ಕಂಡೆಹೆವೆನಲುಂಟೆ? ಸರ್ವಸಂಗಪರಿತ್ಯಾಗವ ಮಾಡಿದ ಯೋಗಿ ತಂದೆ ತಾಯಿ ಸಹೋದರ ಬಂಧುಗಳೆಂದು ಪಕ್ಷವ ಅಂಗೀಕರಿಸಿದಡೆ ತ್ರಿಭಂಗಿಯ ಭುಂಜಿಸಿದವ ಮರವೆಯ ಸುರಾಪಾನವ ಅಂಗೀಕರಿಸಿದವ, ಆತ ಲಿಂಗಾಂಗಿಯಲ್ಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಕ್ಕೆ ಸಲ್ಲ.