Index   ವಚನ - 56    Search  
 
ಪವಳ ಪದ್ಮಾಕ್ಷಿ ಪುತ್ರಜೀವಿ ಮೌಕ್ತಿಕ ರುದ್ರಾಕ್ಷಿ ಇವು ಮುಂತಾದ ಪವಣಿಗೆಯಲ್ಲಿ ಸದ್ಯೋಜಾತಮುಖಕ್ಕೆ ಪವಳಮಾಲೆ ವಾಮದೇವಮುಖಕ್ಕೆ ಪದ್ಮಮಾಲೆ ಅಘೋರ ಮುಖಕ್ಕೆ ಪುತ್ರಿಕಮಾಲೆ ತತ್ಪುರುಷ ಮುಖಕ್ಕೆ ಮೌಕ್ತಿಕಮಾಲೆ ಈಶಾನಮುಖಕ್ಕೆ ರುದ್ರಾಕ್ಷಿ ನೂರೆಂಟರಲ್ಲಿ ಪುನರಪಿಯಾಗಿ ದ್ವಾದಶದಲ್ಲಿ ಶತಸಂಖ್ಯೆಯಲ್ಲಿ ಜಪಧ್ಯಾನದಲ್ಲಿ ಆಹ್ವಾನಿಸಲಿಕ್ಕೆ ನವಬ್ರಹ್ಮತ್ವ ದಶಾವತಾರಕ್ಕೆ ಮುಖ್ಯತ್ವ ಏಕಾದಶ ಶತರುದ್ರರಿಗೆ ಗಣಂಗಳ ಪದಕ್ಕೆ ಸಾಲೋಕ್ಯವಪ್ಪುದು ಈ ಪಂಚಾಕ್ಷರಿಯ ಪ್ರಣಮ. ಇದು ಮೂಲದಿವ್ಯಮಂತ್ರ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ ಪಂಚಾಕ್ಷರಿಯ ಭೇದ.