•  
  •  
  •  
  •  
Index   ವಚನ - 61    Search  
 
ಆದಿಯ ಮುಟ್ಟಿಬಂದ ಶರಣಂಗೆ ಬಂಧವಿಲ್ಲಯ್ಯಾ. ಜನ್ಮಕೋಟಿ ಕ್ರೂರಕರ್ಮವ ಮಾಡಿದವಂಗೆ, ಸೋಂಕಿನ ಸೊಬಗ ಹೇಳಲೇಕೆ? ಅಂಗದಲ್ಲಿ ಲಿಂಗ ಸೋಂಕಿದ ಶರಣಂಗೆ, ಕಾಯದೊಳಗುಳ್ಳ ಕರಣಂಗಳು ಕಳಾಕುಳ ಕಳಾಭೇದವಯ್ಯಾ ಸುಖದ ಸೋಂಕಿನ ಸೊಬಗ, ಇನ್ನಾರಿಗೆಯೂ ಹೇಳಲಿಲ್ಲ ಗುಹೇಶ್ವರ.
Transliteration Ādiya muṭṭibanda śaraṇaṅge bandhavillayyā. Janmakōṭi krūrakarmava māḍidavaṅge, sōṅkina sobaga hēḷalēke? Aṅgadalli liṅga sōṅkida śaraṇaṅge, kāyadoḷaguḷḷa karaṇaṅgaḷu kaḷākuḷa kaḷābhēdavayyā sukhada sōṅkina sobaga, innārigeyū hēḷalilla guhēśvara.
Hindi Translation आदि छूकर आये शरण को बंधन नहीं। जन्मकोटि क्रूर कर्म किये हुए को स्पर्श का अनुभव न कहता , न पूछता सुनो शरीर से लिंग स्पर्श हुए शरण को शरीर में रहे सब इंद्रिय लिंगयुक्त, लिंग अभिव्यक्त करते हैं इस स्पर्श सुख को किसी से नहीं कहता गुहेश्वरा । Translated by: Eswara Sharma M and Govindarao B N
Tamil Translation பரசிவனின் அம்சமாக வந்துள்ள சரணனுக்குப் பிணைப்பில்லை எண்ணற்ற பிறவிகளில் கொடிய வினைகளைச் செய்தவனுக்கு சிவகளையின் எழிலைக் கூறக் கேட்க எஞ்சவில்லை உடலிலே இலிங்கம் தீண்டிய சரணனுக்கு உடலிலுள்ள புலன்கள் இலிங்கக் களையால் நிறைந்தன அந்தப் பரமானந்தப் பேரழகினை எவராலும் விவரிக்க இயலாது குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಆದಿ = ಸರ್ವತತ್ವ್ತಗಳ ಪರಮಮೂಲನಾದ ಪರಶಿವ; ಮುಟ್ಟಿ ಬಂದ = ಆ ಶಿವಸಂಸ್ಪರ್ಶವನ್ನು ಹಿಡಿದು ವಿಶ್ವದಲ್ಲಿ ಅಭಿವ್ಯಕ್ತನಾದ; ಶಿವಾಂಶಸಂಭೂತನಾದ; ಸುಖದ ಸೋಂಕಿನ ಸೊಬಗು = ಲಿಂಗಸೋಂಕಿನಿಂದ ಹಾಗೂ ಲಿಂಗಾನುಭಾವದಿಂದ ಉಂಟಾಗುವ ಪರಮಾನಂದದ ಸೊಬಗು.; Written by: Sri Siddeswara Swamiji, Vijayapura