Index   ವಚನ - 70    Search  
 
ಮಾತಿನ ರಚನೆಯಿಂದ ಗೆಲಿದೆಹೆನೆಂದಡೆ ಬಿಂಗದ ಹೊರೆಯಂತೆ ಅದರಂಗವುಳ್ಳನ್ನಕ್ಕ ಸಂದು ಸಂಶಯದಲ್ಲಿ ಸಂದು ನೋಡಿಹೆನೆಂದಡೆ ಸಂಗಿಗೆ ನೀರು ಉಪ್ಪರಕ್ಕೆ ಬಂದುದುಂಟೆ? ಇಂತೀ ಶ್ರುತಿಸಂದೇಹಿಗಳಿಗೆ ಹಾಕಿದ ಮುಂಡಿಗೆ . ಏಕಚಿತ್ತದಲ್ಲಿ ನಿಂದ ನಿರುತಂಗೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾ ಎಂಬ ಭಾಷೆ.