Index   ವಚನ - 85    Search  
 
ವೇದ ವರ್ಣಕ, ಶಾಸ್ತ್ರ ಸಂದು, ಪುರಾಣ ಪುಚ್ಚವಿಲ್ಲದ ವೃಶ್ಚಿಕ ಆಗಮ ಆಗುಚೇಗೆಯನರಿಯದ ಹೋರಾಟ. ಇಂತಿವೆಲ್ಲವೂ ಐವತ್ತೆರಡಕ್ಷರದ ನಾಮಬೀಜ. ತವರಾಜಂಗೆ ಫಲ ಬಲಿಯಿತೆನಬಹುದೆ? ದಿನ ನಾಯಕಂಗೆ ತಮ ರಮಿಸಿತೆನಬಹುದೆ? ಸುರಭಿಗೆ ಗರ್ಭ ಉದಿಸಿತೆನಬಹುದೆ? ಇಂತು ಸರ್ವಾಂಗ ಸಕಲಯುಕ್ತಿ ಸಂಪೂರ್ಣಂಗೆ ನುಡಿಯೆ ವೇದ, ನಡೆಯೆ ಆಗಮ. ಅಂಗಮಾರ್ಗಂಗಳಲ್ಲಿ ಸಂಬಂಧಿಸುವುದೆ ಶಾಸ್ತ್ರಸಂಪದ. ಇಂತೀ ಅಕ್ಷರಾತ್ಮಕ ತಾನಾಗಿ, ಭಕ್ತಿಕಾರಣದಿಂದ ಲಕ್ಷಿತನಾದ ಕಾರಣ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಆಚಾರ್ಯನಾದ ಭೇದ.