Index   ವಚನ - 102    Search  
 
ಸ್ಥಲಂಗಳ ಭೇದ ವಿವರ: ವೇಣು ವೀಣೆ ಮೌರಿ ವಾದ್ಯಂಗಳಲ್ಲಿ ವಾಯು ಅಂಗುಲಿಯ ಭೇದದಿಂದ ರಚನೆಗಳ ತೋರುವಂತೆ ಘಟದ ಸ್ಥೂಲ ಸೂಕ್ಷ್ಮಂಗಳಲ್ಲಿ ತ್ರಾಣ ತತ್ರಾಣವಾದಂತೆ ಅದು ಭಾವಜ್ಞಾನ ಷಟ್ ಸ್ಥಲ ಕ್ರಿಯಾಭೇದದ ವಾಸ. ಇಂತೀ ಉಭಯದೃಷ್ಟ ನಾಶವಹನ್ನಕ್ಕ ಐಕ್ಯಲೇಪನಲ್ಲಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.