ಅನುದಿನಂಗಳೆಂಬವು ಪ್ರಣತೆಯಾಗಿ,
ವರುಷವೆಂಬವು ಬತ್ತಿಯಾಗಿ,
ಜೀವ ಜ್ಯೋತಿಯ ಬೆಳಗ ಬೆಳಗಿನಲರಿಯಬೇಕು.
ಬೆಳಗುಳ್ಳಲ್ಲಿ ಆತ ನಡೆಸಿದಂತೆ ನಡೆಯಬೇಕು.
ಬೆಳಗುಳ್ಳಲ್ಲಿ ಆತ ನುಡಿಸಿದಂತೆ ನುಡಿಯಬೇಕು.
ಎಣ್ಣೆಯೆಂಬ ಜವ್ವನ ಸವೆಯದ ಮುನ್ನ,
ಬೆಳಗು ಕತ್ತಲೆಯಾಗದ ಮುನ್ನ
ರೇಕಣ್ಣಪ್ರಿಯ ನಾಗಿನಾಥಾ, ಬೆಳಗ ಬೆಳಗಿನಲರಿಯಬೇಕು.
Art
Manuscript
Music
Courtesy:
Transliteration
Anudinaṅgaḷembavu praṇateyāgi,
varuṣavembavu battiyāgi,
jīva jyōtiya beḷaga beḷaginalariyabēku.
Beḷaguḷḷalli āta naḍesidante naḍeyabēku.
Beḷaguḷḷalli āta nuḍisidante nuḍiyabēku.
Eṇṇeyemba javvana saveyada munna,
beḷagu kattaleyāgada munna
rēkaṇṇapriya nāgināthā, beḷaga beḷaginalariyabēku.