Index   ವಚನ - 28    Search  
 
ಚಿತ್ತಾವಧಾನವೆಂದಾಡಬಂದೆ, ಸತ್ಯಶರಣರ ಮುಂದೆ. ಶುಕ್ಲ ಶೋಣಿತವೆಂಬ ಬಾಯಿ ಕಟ್ಟೆಯ ಮೆಟ್ಟಿ ತುಟ್ಟತುದಿಯನೇರಿ ಕೈಯ ಬಿಟ್ಟಾಡುತ್ತಿದ್ದೇನೆ. ಮೆಟ್ಟಿದ ಹೆಜ್ಜೆಯ ಮೆಟ್ಟದೆ, ನೋಡುವ ನಿಷ್ಠೆವಂತರ ದೃಷ್ಟಿ ಪಲ್ಲಟವಾಗದೆ ನೋಡದಿರ್ದಡೆ ಲಾಗು ಎತ್ತ ಹೋಯಿತ್ತೊ ರೇಕಣ್ಣಪ್ರಿಯ ನಾಗಿನಾಥಾ ?