Index   ವಚನ - 44    Search  
 
ಭಕ್ತದೇಹಿಕದೇವನೆಂದು ಅಂಜದ ಮತವದೇನಪ್ಪುದೊ ? ಭಯವಿಲ್ಲದ ಭಕ್ತಿ, ದಯವಿಲ್ಲದ ಶೀಲ ಗುಣವಿಲ್ಲದ ನಂಟು ಮುಂದೇನಪ್ಪುದೊ ? ಭಯವ ಮರೆದು, ಲಿಂಗದೊಡನೆ ಸಹಭೋಜನ ಮಾಡಿದಡೆ ಪಂಚಮಹಾಪಾತಕ ತಪ್ಪದು. ಅದೆಂತೆಂದಡೆ: ಗುರುವ ಬಿಟ್ಟು ಲಿಂಗವನೊಲಿಸಿಹೆನೆಂದಡೆ ಗುರು ಲಿಂಗ ಎರಡೂ ಇಲ್ಲದೆ ಹೋಹವು. ಗುರುವೆಂಬುದೆ ಭಯಭಕ್ತಿ, ಲಿಂಗವೆಂಬುದೆ ಶಿವನು. ಈ ಭಯಭಕ್ತಿಯಿಲ್ಲದೆ ಶಿವನನೊಲಿಸಬಾರದು ರೇಕಣ್ಣಪ್ರಿಯ ನಾಗಿನಾಥಾ.