Index   ವಚನ - 57    Search  
 
ಷಡುಸ್ಥಲ ಷಡುಸ್ಥಲವೆಂದು ನುಡಿವುತ್ತಿರ್ಪಿರಿ, ಕೇಳಿರಣ್ಣಾ: ಒಬ್ಬ ರಾಯನ ಕೆಳಗೆ ಆರು ಬಲ ಉಂಟಾಗಿಪ್ಪಂತೆ ಆ ಪರಶಿವತತ್ವಕ್ಕೆ ಪ್ರಾಣಪದವಪ್ಪರು ಭಕ್ತರುಂಟು. ಆ ಭಕ್ತರಿಗೆ ಗುರುಲಿಂಗಜಂಗಮದ ದಾಸೋಹ. ಪಾದೋದಕ ಪ್ರಸಾದ, ಪಂಚ ಸದಾಚಾರ. ಇಂತಿವೆಲ್ಲವೂ ಪ್ರಾಣಪದವಾಗಿಪ್ಪವು. ಇವರೆಲ್ಲರಿಗೆಯೂ ಶರಣಸತಿ ಲಿಂಗಪತಿಗಳೆಂಬವೆ ಪ್ರಾಣಪದವಾಗಿ, ರೇಕಣ್ಣಪ್ರಿಯ ನಾಗಿನಾಥನಲ್ಲಿ ನಿಂದರು.