Index   ವಚನ - 56    Search  
 
ಷಡುಚಕ್ರವಳಯದೊಳಗೆ ನಾನಾಡುವೆ ಬಹುರೂಪ. ಭ್ರೂಮಧ್ಯಮಂಡಲ ಹೃದಯಕಮಲ ಮಧ್ಯದ ಅಬ್ಜಸ್ವರದ ಮಣಿಪೂರಕದ ಮೇಲೆ ನಾನಾಡುವೆ ಬಹುರೂಪ. ಉರಿಯುಂಡ ಕರ್ಪುರದಂತೆ ನಾನಾಡುವೆ ಬಹುರೂಪ. ಬಯಲ ಬೆರಸಿದ ಮರೀಚಿಯಂತೆ ನಾನಾಡುವೆ ಬಹುರೂಪ. ರೇಕಣ್ಣಪ್ರಿಯ ನಾಗಿನಾಥಾ, ಬಸವಣ್ಣನಿಂದ ಬದುಕಿದೆನು.