Index   ವಚನ - 60    Search  
 
ಸರದೊಳಗೆ ಸರಗಟ್ಟಿ, ಸರ ಹರಿದವ ನಾನಯ್ಯಾ. ಮಹದೊಳಗೆ ಮನೆಗಟ್ಟಿ, ಮನೆ ಬೆಂದವ ನಾನಯ್ಯಾ. ಕಿಚ್ಚಿನೊಳಗೆ ಕಿಚ್ಚನೊಟ್ಟಿ, ಕಾದವ ನಾನಯ್ಯಾ. ಆ ಕಿಚ್ಚಿನೊಳಗೆ ಬಿದ್ದು ಉರಿದವ ನಾನಯ್ಯ. ಬಸವಣ್ಣನು ಎನ್ನ ಬಹುರೂಪಕ್ಕೆ ಸೂತ್ರಧಾರಿಯಾದ. ಸೂತ್ರವಾಗಿ ಹೋದೆ ನಾ. ಬಸವಣ್ಣನಿಂದ ಕೆಟ್ಟೆ ಕಾಣಾ. ರೇಕಣ್ಣಪ್ರಿಯ ನಾಗಿನಾಥಾ, ಬಸವಣ್ಣನಿಂದ ಬದುಕಿತೀ ಲೋಕವೆಲ್ಲ.