Index   ವಚನ - 7    Search  
 
ಐಘಟವೆಂಬ ಅಂಗದಲ್ಲಿ ಐದು ಕುಂಭವ ಕಂಡೆ. ಕುಂಭದನುವೇನೆಂಬುದು, ಮುಂದಣ ಕುಂಭದ ಚಂದನವನೇನೆಂಬೆ. ಆ ಚಂದದ ಮುಂದಣ ಎರಡು ಕುಂಭದ ಮಧ್ಯದಲ್ಲಿ ಒಂದು ಕಮಲವುಂಟು. ಆ ಕುಂಭಕ್ಕೆ ಐದು ಕಮಲ ಉದ್ಭವವಾದವು. ಆ ಕಮಲದೊಳಗಣ ದಿವ್ಯಗಂಧವನು ಕಾಬುದು, ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವಲ್ಲದಿಲ್ಲವೆಂಬೆ.