Index   ವಚನ - 9    Search  
 
ಕವಿ ಕವಿಗಳೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳು ನೀವು ಕೇಳಿರೋ. ತಮ್ಮಂಗ ಪಾಕುಳದೊಳಗಿದ್ದು ಆಕಾಶ ಮುಖಕ್ಕೆ ನಡಸಬಲ್ಲರೆ ಕವಿಗಳೆಂದೆನಿಸಿಕೊಳಬಹುದು. ನಾಲ್ಕು ಪವನವನೊಂದುಮಾಡಿ ಬೀಜವಿಲ್ಲದ ಅಂಕುಂರಮಂ ತುಂಬಿ ಕುಕೂರ್ಮನೆಂಬ ಜಾಡ್ಯವನುಳಿದು ಇಂತವರಿಗಲ್ಲದೆ ಛಂದ ಅಮರಸಿಂಹ ನಿಘಂಟು ವ್ಯಾಕರಣದ ಮಡಕೆಯ ಹಂಚ ಹಿಡಿದು ಆರಾರ ಮನೆಯಲ್ಲಿ ತಿರಿದುಂಬ ಶಿವದ್ರೋಹಿಗಳ ನೋಡಿ ನಗುತಿರ್ದ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರ ಲಿಂಗವು ಅವರ ಬಲ್ಲವನಾಗಿ ಒಲ್ಲನು.