•  
  •  
  •  
  •  
Index   ವಚನ - 624    Search  
 
ಹೊಸ ಮುತ್ತಿನ ಸುಪ್ಪಾಣಿಯಂತೆ ಲಿಂಗೈಕ್ಯವು. ಸ್ಫಟಿಕದ ಘಟದೊಳಗಣ ಪ್ರಭೆಯಂತೆ ಲಿಂಗೈಕ್ಯವು. ವಾಯುವಿನ ಸಂಚದ ಪರಿಮಳದ ನಿಲವಿನಂತೆ ಲಿಂಗೈಕ್ಯ ಸಂಬಂಧವದು ಗುಹೇಶ್ವರಾ.
Transliteration Hosa muttina suppāṇiyante liṅgaikyavu. Sphaṭikada ghaṭadoḷagaṇa prabheyante liṅgaikyavu. Vāyuvina san̄cada parimaḷada nilavinante liṅgaikya sambandhavadu guhēśvarā.
Hindi Translation नये मोती की चमक जैसे लिंगैक्य । स्फटिक घटा की प्रभा जैसे लिंगैक्य । वायु संबंध परिमल की स्थिति जैसी वह लिंगैक्य संबंध है गुहेश्वरा। Translated by: Eswara Sharma M and Govindarao B N
Tamil Translation இலிங்க இணைவு புதிய முத்தின் ஒளியனையதாம், இலிங்க இணைவு பளிங்கு குடத்தின் ஒளியனையதாம், தென்றலில் மறைந்துள்ள நறுமணத்தனையதாம், இலிங்க இணைவின் தொடர்பாம் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಲಿಂಗೈಕ್ಯವು = ಲಿಂಗ ಮತ್ತು ಅದರೊಳಗೆ ಐಕ್ಯನಾದ ಶರಣನ ಸಂಬಂಧವು; ಸಂಚ = ಸಂಬಂಧ, ಗುಟ್ಟು; ಸುಪ್ಪಾಣಿ = ಹೊಳಪು; Written by: Sri Siddeswara Swamiji, Vijayapura