ಕುಲಗೋತ್ರಜಾತಿಸೂತಕದಿಂದ
ಕೆಟ್ಟವರೊಂದು ಕೋಟ್ಯಾನುಕೋಟಿ
ಜನನ ಸೂತಕದಿಂದ ಕೆಟ್ಟವರು ಅನಂತಕೋಟಿ.
ಮಾತಿನ ಸೂತಕದಿಂದ ಮೋಸವಾದವರು
ಮನು ಮುನಿಸ್ತೋಮ ಅಗಣಿತಕೋಟಿ.
ಆತ್ಮಸೂತಕದಿಂದ ಅಹಂಕರಿಸಿ ಕೆಟ್ಟವರು
ಹರಿಹರ ಬ್ರಹ್ಮಾದಿಗಳೆಲ್ಲರು.
'ಯದ್ದೃಷ್ಟಂ ತನ್ನಷ್ಟಂ' ಎಂಬುದನರಿಯದೆ
ಹದಿನಾಲ್ಕುಲೋಕವೂ ಸಂಚಿತಾಗಾಮಿಯಾಗಿ
ಮರಳಿ ಮರಳಿ ಹುಟ್ಟುತ್ತಿಪ್ಪರಯ್ಯ.
ಇಂತೀ ಸೂತಕದ ಪ್ರಪಂಚ ಬಿಡಲಾರದ ಪಾಷಂಡಿ ಮರುಳುಗಳಿಗೆ
ಪರಬ್ರಹ್ಮ ದೊರಕುವದೆ ಅಯ್ಯಾ?
ಇದು ಕಾರಣ, ನಾಮರೂಪುಕ್ರೀಗಳಿಗೆ ಸಿಲ್ಕುವನಲ್ಲವಯ್ಯ.
ಅಗಮ್ಯ ಅಪ್ರಮಾಣ ಅಗೋಚರವಯ್ಯ.
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ
ರಾಜೇಶ್ವರಲಿಂಗವಲ್ಲದೆ ಉಳಿದವರಿಗಿಲ್ಲವೆಂಬೆನು.
Art
Manuscript
Music
Courtesy:
Transliteration
Kulagōtrajātisūtakadinda
keṭṭavarondu kōṭyānukōṭi
janana sūtakadinda keṭṭavaru anantakōṭi.
Mātina sūtakadinda mōsavādavaru
manu munistōma agaṇitakōṭi.
Ātmasūtakadinda ahaṅkarisi keṭṭavaru
harihara brahmādigaḷellaru.
'Yaddr̥ṣṭaṁ tannaṣṭaṁ' embudanariyade
hadinālkulōkavū san̄citāgāmiyāgi
maraḷi maraḷi huṭṭuttipparayya.
Intī sūtakada prapan̄ca biḍalārada pāṣaṇḍi maruḷugaḷige
parabrahma dorakuvade ayyā?
Idu kāraṇa, nāmarūpukrīgaḷige silkuvanallavayya.
Agamya apramāṇa agōcaravayya.
Basavapriya viśvakarmaṭakke kāḷikāvimala
rājēśvaraliṅgavallade uḷidavarigillavembenu.