ರುಜೆ ರೋಗಂಗಳು ಲಿಂಗದೇಹಿಗಳೆಂಬವರ ಸೋಂಕಿದಲ್ಲಿ,
ರೋಗದ ಇಚ್ಫೆಯನರಿದು ನರಳಿದಲ್ಲಿ,
ಲಿಂಗದ ಚಿತ್ತವೆತ್ತಹೋಯಿತ್ತು?
ಪಂಚಾಕ್ಷರಿ ಪ್ರಣವ ನಷ್ಟವಾಯಿತ್ತು.
ಅರ್ಚನೆಯ ಪೂಜೆ ಕೆಟ್ಟಿತ್ತು. ಕೃತ್ಯದ ನೇಮ ಭ್ರಷ್ಟವಾಯಿತ್ತು.
ಇಂತಿವರ ಲಿಂಗದೇಹಿಗಳೆಂದಡೆ ಲಿಂಗಸಂಗಿಗಳೊಪ್ಪುವರೆ ?
ಈ ಗುಣ ಸಂಗನಬಸವಣ್ಣಂಗೆ ದೂರ.
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗಕ್ಕೆ ದೂರ.
Art
Manuscript
Music
Courtesy:
Transliteration
Ruje rōgaṅgaḷu liṅgadēhigaḷembavara sōṅkidalli,
rōgada icpheyanaridu naraḷidalli,
liṅgada cittavettahōyittu?
Pan̄cākṣari praṇava naṣṭavāyittu.
Arcaneya pūje keṭṭittu. Kr̥tyada nēma bhraṣṭavāyittu.
Intivara liṅgadēhigaḷendaḍe liṅgasaṅgigaḷoppuvare?
Ī guṇa saṅganabasavaṇṇaṅge dūra.
Basavaṇṇapriya viśvakarmaṭakke
kāḷikāvimala rājēśvaraliṅgakke dūra.