Index   ವಚನ - 29    Search  
 
ವಿಕಾರಿ ವಿರಕ್ತನಲ್ಲ. ಪ್ರಕೃತಿಜೀವಿ ಅರ್ತಿಕಾರ ಕ್ಷಣಿಕ ಪರಿಹಾಸಕ ಭಕ್ತನಲ್ಲ. ಕುಚಿತ್ತ ಕುಹಕ ದುರ್ವಿದಗ್ಧ ಪಿಸುಣ ಘಾತುಕ ಅಪ್ರಮಾಣ ಗುರುಮೂರ್ತಿಯಲ್ಲ. ಈ ತ್ರಿವಿಧಧರ್ಮ ಇದಿರಾತ್ಮನನರಿಯದೆ ಬೇಡಿ ಕಾಡಿಯುಂಬವ ಚರಮೂರ್ತಿಯಲ್ಲ. ಸತ್ಯರುಗಳ ಇಚ್ಫೆಯನರಿದು ಅಚ್ಚೊತ್ತಿದಂತಿರದಿರ್ದಡೆ ಕರ್ತೃಸ್ವರೂಪಕೆ ಸಲ್ಲ. ಇಂತಿವರಲ್ಲಿ ಅವಗುಣವ ಕಂಡು ಭಕ್ತಂಗೆ ಬಿಡಬಾರದು. ಬಾಯೊಳಗಣ ಬಗದಳದಂತೆ ವಿರಕ್ತಂಗೂ ಗುರುಚರಕ್ಕೂ ಪರಶಿವಮೂರ್ತಿಗೂ ಸದ್ಭಕ್ತನೆ ಘನ. ಅಷ್ಟಾಷಷ್ಟಿಕೋಟಿತೀರ್ಥಂಗಳು, ದಿವ್ಯದೇವಸ್ಥಾನಂಗಳು ಸಕಲ ವೇದ ಶಾಸ್ತ್ರ ಪುರಾಣ ಆಗಮಂಗಳು ಭಕ್ತನ ಬಾಗಿಲ ನೀರಿಂಗೆ ಸರಿಯಲ್ಲವೆಂದು ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ಭಕ್ತರ ಕಟ್ಟುಗೊತ್ತಿನಲ್ಲಿರಬೇಕು.