Index   ವಚನ - 2    Search  
 
ಊರಿಗೆ ಹೋಹಾತ ದಾರಿಯ ಭಯಂಗಳನರಿದು ಆರೈಕೆಯಿಂದ ಹೋಗಬೇಕು. ಕುರಿತ ಕುರುಹ ಹಿಡಿವನ್ನಕ್ಕ ಭೇದ ವಿವರವ ಸೋದಿಸಬೇಕು. ಸೋದಿಸಿ ಸ್ವಸ್ಥವಾಗಿ ನಿಜನಿಂದಲ್ಲಿ ಉಭಯದ ಕುರುಹು ಅನಾದಿಯಲ್ಲಿ ಅಡಗಿತ್ತು. ಅಡಗಿದ ಮತ್ತೆ ವೀರಶೂರ ರಾಮೇಶ್ವರಲಿಂಗವ ಕುರುಹಿಡಲಿಲ್ಲ.