Index   ವಚನ - 8    Search  
 
ಶುದ್ಧಾಧ್ವವಳವಟ್ಟ ಯೋಗಿಯೇ ಪರಮಗುರು. ಶರಣರ ಮನವಿರ್ದಂತಿರ್ದಲ್ಲಿಯೆ ಇರಬಲ್ಲಡೆ ಪರಮನೇ ಲಿಂಗ. ಶರಣೈಕ್ಯನುಭಾವವನು ಕೂಡಿದಾತನೇ ಪರಮ ವಿರತ. ಶರಣ ಸುಮನ ಸುಮ್ಮಾನದೊಳಿರಬಲ್ಲಡಾತನೇ ಕಮಠೇಶ್ವರಲಿಂಗಕ್ಕೆ ಭಕ್ತನಯ್ಯಾ, ಚೆನ್ನಬಸವಣ್ಣ.