ನೀರಿಲ್ಲದ ಒರಳಿಂಗೆ ನೆಳಲಿಲ್ಲದ ಒನಕೆ!
ರೂಹಿಲ್ಲದ ನಾರಿಯರು ಬೀಜವಿಲ್ಲದಕ್ಕಿಯ ತಳಿಸುತ್ತಲಿ
ಬಂಜೆಯ ಮಗನ ಜೋಗುಳವಾಡುತ್ತೈದಾರೆ,
ಉರಿಯ ಚಪ್ಪರವನಿಕ್ಕಿ.
ಗುಹೇಶ್ವರನ ಕಂದನು ಲೀಲೆಯಾಡಿದನು!
Transliteration Nīrillada oraḷiṅge neḷalillada onake!
Rūhillada nāriyaru bījavilladakkiya taḷisuttali
ban̄jeya magana jōguḷavāḍuttaidāre,
uriya capparavanikki.
Guhēśvarana kandanu līleyāḍidanu!
English Translation 2 In the mortar without water,
pestles without shadows.
Women without bodies
pound rice without grains,
and sing lullabies
to the barren woman's son.
Under streamers of fire,
plays the child of the Lord.
Translated by: A K Ramanujan
Book Name: Speaking Of Siva
Publisher: Penguin Books
---------------------
Hindi Translation पानी रहित ओखल को छाया रहित मूसल ।
रूप रहित नारियाँ बीजरहित चावल कूटती।
बाँझ के पुत्र की लोरी गा रही है।
जलते चप्पर रखकर
गुहेश्वर के बेटे ने लीला की !
Translated by: Eswara Sharma M and Govindarao B N
Tamil Translation நீரற்ற உரலிற்கு நிழலற்ற உலக்கை,
வடிவற்ற மகளிர் விதையற்ற அரிசியை
இடிக்கும்பொழுது, மலடியின் மகனைத்
தாலாட்டினர். தீப்பந்தலிலே
குஹேசுவரனின் குழந்தை லீலை புரிந்தனன்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಕ್ಕಿ = ಶಿವತತ್ವ್ತ; ಉರಿಯ ಚಪ್ಪರ = ಶಿವೋsಹಂ ಎಂಬ ಜ್ಞಾನಪ್ರಭಾಛತ್ರ; ಒನಕೆ = ಧ್ಯಾನವೃತ್ತಿ; ಒರಳು = ಮನಸ್ಸು; ಕಂದ = ನಿರ್ಮಲಾತ್ಮನಾದ ಐಕ್ಯಸ್ಥಲಿಶರಣ; ಜೋಗುಳವಾಡು = ಗಾನಮಾಡು; ತಳಿಸು = ಚಿಂತನೆ ಮಾಡು ಹಾಗೂ ಅಭಿವ್ಯಕ್ತಗೊಳಿಸು; ನಾರಿಯರು = ಷಡ್ವಿದ ಭಕ್ತಿಗಳು ಎಂಬ ತಾರಕ ಶಕ್ತಿಗಳು; ನೀರು = ಚಾಂಚಲ್ಯ; ನೆಳಲು = ವಿಕ್ಷೇಪ; ಬಂಜೆಯ ಮಗ = ನಿರ್ವಿಕಾರವಾದ ಪರವಸ್ತುವಿನಿಂದ ಕಾಣಬಂದ ದಿವ್ಯ ಆತ್ಮತತ್ವ್ತ; ಬೀಜ = ಜನ್ಮಕ್ಕೆ ಕಾರಣವಾದುದು; ರೂಹು = ಸ್ಥೂಲ, ಆಕಾರ;
Written by: Sri Siddeswara Swamiji, Vijayapura