ಶಯನಾಸನ ಪರವಿಲ್ಲೆಂದುದು.
ಜ್ಞಾನಾಜ್ಞಾನ ಭಾವ ನೋಟ ತಾನಲ್ಲ,
ಅರಿವಿನ ಭಾವ ಸ್ವತಂತ್ರವಿಲ್ಲ ಕಾಣಾ.
ಆಕಾಯದಲ್ಲಿ ಅದ್ವೈತ ಚರಿತ್ರ;
ಅರಿವಿನಲನುಗ್ರಹಿಸಿ ಸಕಾಯದಲ್ಲಿ ಸದೈವ ಚರಿತ್ರ.
ಮರಹು ಉದಯಿಸದ ನಿರುಗೆಯ ಪವನ ಬ್ರಹ್ಮರಂಧ್ರರಹಿತ!
ಶಯನಾಸನವೆಂದಲ್ಲಿ ಗುಹೇಶ್ವರನೆನಲು ಹೇಸಿತ್ತು.
Transliteration Śayanāsana paravillendudu.
Jñānājñāna bhāva nōṭa tānalla,
arivina bhāva svatantravilla kāṇā.
Ākāyadalli advaita caritra;
arivinalanugrahisi sakāyadalli sadaiva caritra.
Marahu udayisada nirugeya pavana brahmarandhrarahita!
Śayanāsanavendalli guhēśvaranenalu hēsittu.
Hindi Translation शयनासन भिन्न नहीं।
ज्ञानाज्ञान भव भाव दृष्टी नहीं,
ज्ञान का भावस्वतंत्र नहीं देखो।
अकाय में अद्वैत चरित्र;
ज्ञान में अनुग्रहकर सकाय में सदैव चरित्र।
भूल जन्म नहीं लेता, पवन नहीं चलता, ब्रह्मरंध्र रहित ।
शयनासन है तो गुहेश्वर कहते घृणा होती है।
Translated by: Eswara Sharma M and Govindarao B N
Tamil Translation கிடத்தல் அமர்தலில் மாறுபாடில்லை,
ஞான, அஞ்ஞான நோட்டமில்லை,
அறிவுணர்விற்குச் சுதந்திர இருப்பில்லை,
உடலுணர்வற்ற நிலையில் அத்துவைத உணர்வு
அறிவு வெளிப்பட, உடல்புலன்களின் புனிதம்!
மறதி தோன்றா, காற்றின் சலனமற்ற பிரம்மரந்திரமிலை
கிடத்தல் அமர்தல் எனும் இவை
குஹேசுவரனுக்கு வெகுதொலைவாம்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಕಾಯ = ಕಾಯಭಾವವಿಲ್ಲದ ಸ್ಥಿತಿ, ಚಿದ್ಘನಲಿಂಗದ ನೆಲೆ; ಅದ್ವೈತ ಚರಿತ್ರ = ದ್ವೈತಭಾವವಡಗಿದ ನಿಲುವು; ಅನುಗ್ರಹಿಸು = ಕರುಣಿಸು, ಅಭಿವ್ಯಕ್ತವಾಗು; ಅರಿವಿನ ಭಾವ = ಭಿನ್ನವಿಟ್ಟು ಅರಿಯುವೆನು ಎಂಬ ಭಾವ; ಆಸನ = ಕುಳ್ಳಿರುವುದು; ಉದಯಿಸು = ಕಾಣಬರು; ನಿರುಗೆ = ಜೋಡಣೆ, ಪ್ರಾಣಾಪಾನಗತಿಬಂಧನ; ನೋಟ = ದೃಷ್ಟಿ; ಪರ = ಭಿನ್ನ; ಬ್ರಹ್ಮರಂಧ್ರ = ಸ್ಥೂಲ-ಸೂಕ್ಷ್ಮ ದೇಹಗತವಾದ ಸಪ್ತಮಚಕ್ರ, ಅಮೃತರಸಪಾನದ ನಿಲಯ; ಶಯನ = ವಿಶ್ರಮಿಸುವುದು; ಶಯನಾಸನ = ಮಲಗುವುದು, ಕೂರುವುದು ಈ ಮುಂತಾದ ಕ್ರಿಯೆಗಳಿಂದ ಕೂಡಿದ ಬದುಕು; ಸಕಾಯ = ಕಾಯಭಾವ, ಕಾಯ-ಕರಣಂಗಳು; ಸದೈವ ಚರಿತ್ರ = ಪವಿತ್ರಾಶರಣಶೀಲ; ಸ್ವತಂತ್ರವಿಲ್ಲ = (ಅದಕ್ಕೆ) ಸ್ವತಂತ್ರವಾದ ಅಸ್ತಿತ್ವವಿಲ್ಲ; ಹೇಸು = ಸಲ್ಲದು;
Written by: Sri Siddeswara Swamiji, Vijayapura