ದೃಷ್ಟಕ್ಕೆ ದೃಷ್ಟ ಮುಂದಿಲ್ಲ, ಇಲ್ಲ.
ಮಾಡಿದಡೇನಹುದೊ? ಮಾಡದಿರ್ದಡೇನಹುದೊ?
ಗುಹೇಶ್ವರನೆಂಬ ಅರುಹಿನ ಕುರುಹು ಮುಂದಿಲ್ಲ, ಇಲ್ಲ.
ಮಾಡಿದಡೇನಹುದೊ?
Transliteration Dr̥ṣṭakke dr̥ṣṭa mundilla, illa.
Māḍidaḍēnahudo? Māḍadirdaḍēnahudo?
Guhēśvaranemba aruhina kuruhu mundilla, illa.
Māḍidaḍēnahudo?
Hindi Translation दृष्टी को दृष्ट आगे नहीं, नहीं,
करें तो क्या, न करें तो क्या ?
गुहेश्वर कहना ज्ञान का चिह्न आगे नहीं, नहीं,
करे तो क्या, न करे तो क्या ?
Translated by: Eswara Sharma M and Govindarao B N
Tamil Translation அறிவிற்கு அறிவு என்றுமில்லை, இல்லை
செய்தால் என்னவோ விட்டாலென்னவோ?
குஹேசுவரனெனும் அறிவின் சின்னம்
என்றுமில்லை, இல்லை
செய்தால் என்னவோ, விட்டால் என்னவோ?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕುರುಹು = ಚಿದ್ಘನಲಿಂಗದ ಅರಿವನ್ನುಂಟುಮಾಡುವ ಚಿಹ್ನೆ, ಸಾಧನೆ; ದೃಷ್ಟ = ಎಲ್ಲವನ್ನು ಅರಿವ, ಎಲ್ಲದಕ್ಕೂ ಸಾಕ್ಷಿಯಾದ ಲಿಂಗ; ಮಾಡು = ಉಪಚಾರಪರವಾದ ಆಚರಣೆಗಳನ್ನು ಮಾಡು, ಸತ್ಕ್ರಿಯೆ;
Written by: Sri Siddeswara Swamiji, Vijayapura