•  
  •  
  •  
  •  
Index   ವಚನ - 639    Search  
 
ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು ಬಯಲು ಬಯಲಾಗಿ ಬಯಲಾಯಿತ್ತಯ್ಯಾ. ಬಯಲ ಜೀವನ ಬಯಲ ಭಾವನೆ, ಬಯಲು ಬಯಲಾಗಿ ಬಯಲಾಯಿತ್ತಯ್ಯಾ. ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು ನಾ ನಿಮ್ಮ ಪೂಜಿಸಿ ಬಯಲಾದೆ ಗುಹೇಶ್ವರಾ.
Transliteration Bayalu bayalane bitti bayalu bayalane beḷedu bayalu bayalāgi bayalāyittayyā. Bayala jīvana bayala bhāvane, bayalu bayalāgi bayalāyittayyā. Nim'ma pūjisidavaru munnave bayalādaru nā nim'ma pūjisi bayalāde guhēśvarā.
Music Courtesy: Vachana Sangama - Shiva Sharanara Vachanagalu - Part 4, Singer: Parameshwar Hegde • H.K. Narayana • N.S. Prasad ℗ Lahari Recording Company Released on: 2014-08-01
Art
Hindi Translation शून्य शून्य को बोकर, शून्य शून्य को बडा कर, शून्य शून्य होकर शून्य हुआ। शून्य जीवन, शून्य भावना; शून्य शून्य होकर शून्य हुआ। तुम्हें पूजाकर पहले ही शून्य हुए। मैं तुम पर विश्वास कर शून्य हुआ गुहेश्वरा। Translated by: Eswara Sharma M and Govindarao B N
Tamil Translation வயல் வயலையே விதைத்து, வயலையே விளைவித்து, வயல் வயலாகி வயலாயிற்றன்றோ! வயல் வாழ்வு, வயல் உணர்வு, வயல வயலாகி வயலாயிற்றன்றோ! உம்மைப் பூஜித்தவர் முன்பே வயலாயினர், நான் உம்மை நம்பி வயலானேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ನಂಬು = ಆ ಬಯಲೇ ತಾನೆಂದು ಪರಿಭಾವಿಸು; ಪೂಜಿಸು = ಅರಿತು ಅನುಸಂಧಾನಿಸಿ ಬಯಲಿನೊಳು ಬೆರೆತುಹೋಗು; ಬಯಲು ಬಯಲು = ಬರಿ ಬಟ್ಟಬಯಲು; ಬಿತ್ತು = ಆ ಬಯಲಿನ ಜ್ಞಾನವನ್ನು ಶಿಷ್ಯನಿಗೆ ಕರುಣಿಸು; ಬೆಳೆ = ಸಾಧನೆಯ ಮೂಲಕ ವಿಕಾಸಗೊಳಿಸಿಕೊಳ್ಳು; Written by: Sri Siddeswara Swamiji, Vijayapura