Index   ವಚನ - 1    Search  
 
ಅಂಗದ ಬೊಕ್ಕಸದ ಮಂದಿರಕ್ಕೆ ಚಿದ್ಘನಲಿಂಗವೆಂಬುದೊಂದು ಬೀಗ, ತ್ರಿಗುಣವೆಂಬ ಮೂರೆಸಳಿನ ಸಿಕ್ಕು. ಒಂದು ಪೂರ್ವಗತಿ, ಒಂದು ಮಧ್ಯಗತಿ, ಒಂದು ಉತ್ತರಗತಿಯಾಗಿ ಸಿಕ್ಕಿದವು ಮೂರೆಸಳು. ಆ ಎಸಳಿಗೆ ಘಟ ಒಂದೆ ಒಡಲು. ಎಸಳ ತೆಗವುದಕ್ಕೆ ಕೈಯ ಕಾಣೆ. ಪ್ರತಿ ಕೈಗೆ ಎಸಳು ಅಸಾಧ್ಯ ನೋಡಾ. ಇಂತೀ ಬೀಗದ ಗುಣವ ಬಸವಣ್ಣಪ್ರಿಯ ನಾಗರೇಶ್ವರಲಿಂಗಾ ನೀವೇ ಬಲ್ಲಿರಿ.