Index   ವಚನ - 2    Search  
 
ಅಂಗಲಿಂಗಸಂಬಂಧಿಗಳು ನಿಮ್ಮನರಿಯರು. ಪ್ರಾಣಲಿಂಗಸಂಬಂಧಿಗಳು ನಿಮ್ಮನರಿಯರು. ಎಂತೆನೆ, ಅಂಗಲಿಂಗವೆಂದು, ಪ್ರಾಣಲಿಂಗವೆಂದು ಉಭಯದ ಸಂದುಂಟೆ ? ಕರ್ಪುರಕುಂಭದಲ್ಲಿ ಹಾಕಿದ ಕಿಚ್ಚು, ಒಳಗು ಬೆಂದು, ಹೊರಗು ನಿಂದುದುಂಟೆ ? ಇಂತೀ ಇಷ್ಟಲಿಂಗ ಪ್ರಾಣಲಿಂಗವೆಂದು ಉಭಯದ ಗುಟ್ಟಿನಲ್ಲಿ ಮತ್ತರಾದರಿಗೆ ಇಷ್ಟ ದೃಷ್ಟದಲ್ಲಿ ಇಲ್ಲ, ಆತ್ಮನು ನಿಶ್ಚಯದಲ್ಲಿ ನಿಲ್ಲ, ಬಸವಣ್ಣಪ್ರಿಯ ನಾಗರೇಶ್ವರಲಿಂಗವನೆತ್ತ ಬಲ್ಲರೊ ?