ಪರಿಣಾಮ ಅಪರಿಮಿತ ದೊರೆಕೊಂಡಾತಂಗೆ
ಬಳಿಕೇಕೊ ಬರು ಮಾತಿನವರೊಡನೆ ಗೋಷ್ಠಿ?
ಬಳಿಕೇಕೊ ಬರಿಯ ಸಂಭ್ರಮಿಗಳೊಡತಣ ಅನುಭಾವ?
ಐವತ್ತೆರಡಕ್ಷರ ತಮ್ಮಲ್ಲಿ ತಾವು ಉಲಿಯದಂತೆ ಉಲಿದವು,
ಗುಹೇಶ್ವರನೆಂಬ ಲಿಂಗವನರಿದಾತಂಗೆ ಬಳಿಕೇಕೊ?
Transliteration Pariṇāma aparimita dorekoṇḍātaṅge
baḷikēko baru mātinavaroḍane gōṣṭhi?
Baḷikēko bariya sambhramigaḷoḍataṇa anubhāva?
Aivatteraḍakṣara tam'malli tāvu uliyadante ulidavu,
guhēśvaranemba liṅgavanaridātaṅge baḷikēko?
Hindi Translation सीमित परिणाम पाये हुए को
बाद में व्यर्थ बातें करनेवालों की गोष्ठी क्यों ?
बाद में सिर्फ शब्द सुखियों की अनुभाव क्यों?
बावन अक्षरों के वागाडंबर में अपने आप बोलते।
गुहेश्वर जैसे लिंग पहचान ने के बाद क्या?
Translated by: Eswara Sharma M and Govindarao B N
Tamil Translation பேரின்பத்தை அடைந்த ஒருவனுக்கு
பொருளற்றுப் பேசுவோரின் தொடர்பெதற்கு?
வெற்றுச்சொல்லாடுவோருடன் அனுபவம்
குறித்துப் பேசவியலுமோ? ஐம்பத்திரண்டு
எழுத்துக்கள் தம்முள்ளே தாமே ஒலிப்பதனைய
ஒலித்தன. குஹேசுவரனெனும் இலிங்கத்தை
அறிந்த அவனுக்குச் சொற்களின் சிக்கலெதற்கோ?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಐವತ್ತೆರಡಕ್ಷರ = ಆ ಅಕ್ಷರಗಳ ಸಂಯೋಜನೆಯಿಂದ ಉಂಟಾಗುವ ಎಲ್ಲ ಮಾತುಗಳು; ಗೋಷ್ಠಿ = ಆಧ್ಯಾತ್ಮಿಕ ವಿಷಯ ಕುರಿತಾದ ಚರ್ಚೆ; ಪರಿಣಾಮ = ಲಿಂಗಾಂಗಸಮರಸಾನುಭವ; ಪರಿಮಿತ = ಸೀಮಿತ, ಪರಿಣಾಮ; ಪರಿಮಿತ = ಕೇವಲ ಆನಂದ; ಬರುಮಾತು = ಬರಿ ಮಾತು, ಅರ್ಥವಿಲ್ಲದ ಮಾತು; ಸಂಭ್ರಮಿ = ಶಬ್ದಸುಖಿ;
Written by: Sri Siddeswara Swamiji, Vijayapura