ಅರಸಲಿಲ್ಲದ ಘನವ ಅರಸುವದದೇನೊ?
ತಿಳಿವುದದೇನೊ?
ತಿಳುಹಿನ ಮುಂದಣ ಸುಳುಹು ತಾನೇನೊ?
ಸರದ ಸಮತೆಯ ಪರಿಣಾಮವ ನೋಡಾ!
ಗುಹೇಶ್ವರನೆಂಬುದು ಅದೆ ಕಂಡಾ!
Transliteration Arasalillada ghanava arasuvadadēno?
Tiḷivudadēno?
Tiḷuhina mundaṇa suḷuhu tānēno?
Sarada samateya pariṇāmava nōḍā!
Guhēśvaranembudu ade kaṇḍā!
Hindi Translation बिना ढूँढे घन को ढूँढना क्या ?जानना क्या ?
ज्ञान के आगे चिह्न क्या है ?
स्वर की समता का परिणाम देखो
गुहेश्वर वहीं है देखो ।
Translated by: Eswara Sharma M and Govindarao B N
Tamil Translation தேடத் தேவையற்ற பரம்பொருளைத் தேடுவதேனோ,
அறிவதேனோ? அறிவின் முன்பு அடையாள மெதற்கோ?
ஒலி அடங்கிய பேரின்பத்தைப் காணாய்
குஹேசுவரனென்பது அதுவே காணாய்!
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಸು = ಹುಡುಕು, ಶೋಧಿಸು, ಎದುರಿಟ್ಟು ಕಾಣು; ಘನ = ಪರವಸ್ತು; ತಿಳುಹು = ಪರಮ ಅರಿವು; ಪರಿಣಾಮ = ಪರಮಾನಂದದ ನಿಲುವು; ಸಮತೆ = ಸಮಭಾವ, ಸಮಸ್ಥಿತಿ, ನಿಶ್ಯಬ್ದತೆ; ಸರ = ಸ್ವರ, ಶಬ್ದ; ಸುಳುಹು = ಸುಳಿವ ವಸ್ತು;
Written by: Sri Siddeswara Swamiji, Vijayapura