ವಸುಧೆಯಿಲ್ಲದ ಬೆಳಸು,
ರಾಜಾನ್ನ ಹೆಸರಿಲ್ಲದ ಓಗರ,
ವೃಷಭ ಮುಟ್ಟದ ಹಯನು,
ಬೆಣ್ಣೆಯ ಹೊಸೆವರಿಲ್ಲದೆ ಕಂಡುಂಡೆನು.
ಶಿಶು ಕಂಡ ಕನಸಿನಂತೆ,
ಗುಹೇಶ್ವರನೆಂಬುದು ಹೆಸರಿಲ್ಲದ ಬಯಲು!
Transliteration Vasudheyillada beḷasu,
rājānna hesarillada ōgara,
vr̥ṣabha muṭṭada hayanu,
beṇṇeya hosevarillade kaṇḍuṇḍenu.
Śiśu kaṇḍa kanasinante,
guhēśvaranembudu hesarillada bayalu!
Hindi Translation बिना वसुधा धान राजान्न, नाम रहित नैवेद्य ,
वृषभ छूने बिना दुधारू जावर,
बिना मथे माखन देख खाया।
शिशु सपना देखे जैसे,
गुहेश्वर कहना नाम रहित शून्य ।
Translated by: Eswara Sharma M and Govindarao B N
Tamil Translation நிலமற்று விளைந்த சிறந்த அரிசி, பெயரற்ற அன்னம்,
தூயபசுவின்பால், கடையாது எடுத்தவெண்ணெயைக்
கண்டுஉண்டேன். குழந்தை கண்ட கனவனைய
குஹேசுவரனென்பது பெயரற்ற வயலன்றோ.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಉಣ್ಣು = ಊಟಮಾಡು, ಅನುಭವಿಸು, ತೃಪ್ತಿಹೊಂದು; ಬೆಳಸು = ಬೆಳೆ, ಸುಖ; ರಾಜಾನ್ನ = ಶ್ರೇಷ್ಠವಾದ ಅಕ್ಕಿ, ಪರಮಸುಖ; ವಸುಧೆ = ಭೂಮಿ, ಕಾಯದ ಭಾವ; ವೃಷಭ ಮುಟ್ಟದ ಹಯನು = ಮೀಸಲಳಿಯದ ಆಕಳ ಹಾಲು, ವಿಷಯ ಸ್ಪರ್ಶವಿಲ್ಲದೆ ಹೊರಹೊಮ್ಮುವ ಮಧುರ ಭಾವ, ಅತಿ ನಿರ್ಮಲವಾದ ಸಮರಸ ಭಕ್ತಿ; ಹೆಸರಿಲ್ಲದ ಓಗರ = ಅತಿ ವಿಶೇಷವಾದ ಪಕ್ವಾನ್ನ; ಹೊಸೆವರಿಲ್ಲದೆ ಕಂಡ ಬ = ಮಥನವಿಲ್ಲದೆ ಪ್ರಾಪ್ತವಾದ ಬೆಣ್ಣೆ, ಕರಣ ಮಥನವಿಲ್ಲದೆ ಕಾಣಬಂದ ಶಿವಾನುಭೂತಿ;
Written by: Sri Siddeswara Swamiji, Vijayapura