ಜಾತಿ ನಾಲ್ಕುವಿಡದು ಜಂಗಮವ ಮಾಡಬೇಕೆಂಬ
ಗುರುದ್ರೋಹಿಯ ಮಾತ ಕೇಳಲಾಗದು.
ಅದೆಂತೆಂದಡೆ:'ಯತ್ಕುಲಂ ಗುರುಮುಖಂ
ಚೈವಂ ತತ್ಕುಯೋ ನಾಸ್ತಿಯೋದ್ಗುರುಃ
'ಯೋ ತತ್ಕುಲಂ' ಎಂದುದಾಗಿ.
ಇಂತೆಂಬ ಶ್ರುತಿಯನರಿದು ಸಮಸ್ತ ಕುಲಗೋತ್ರ ಆಶ್ರಮ ನಾಲ್ಕ ಹೇಳಿ,
ಕಳಸ ಪಂಚಕವನಿಕ್ಕಿ, ಹಲವು ಮಂತ್ರವಿಡಿದು ಮಾಡುವ ಭವಿಶೈವದೀಕ್ಷೆಯ
ಅಂಗಲಿಂಗಸಂಬಂಧವನುಳ್ಳ ನಿಜವೀರಶೈವಕ್ಕೆ ಮಾಡುವ
ಅಜ್ಞಾನಿಗಳಿಗೆ ರವಿಸೋಮರುಳ್ಳನ್ನಕ್ಕ ನರಕ ತಪ್ಪದೆಂದ,
ಕಲಿದೇವಯ್ಯ.
Art
Manuscript
Music
Courtesy:
Transliteration
Jāti nālkuviḍadu jaṅgamava māḍabēkemba
gurudrōhiya māta kēḷalāgadu.
Adentendaḍe:'Yatkulaṁ gurumukhaṁ
caivaṁ tatkuyō nāstiyōdguruḥ
'yō tatkulaṁ' endudāgi.
Intemba śrutiyanaridu samasta kulagōtra āśrama nālka hēḷi,
kaḷasa pan̄cakavanikki, halavu mantraviḍidu māḍuva bhaviśaivadīkṣeya
aṅgaliṅgasambandhavanuḷḷa nijavīraśaivakke māḍuva
ajñānigaḷige ravisōmaruḷḷannakka naraka tappadenda,
kalidēvayya.