•  
  •  
  •  
  •  
Index   ವಚನ - 667    Search  
 
ಮೂರರಲ್ಲಿ ಮುಟ್ಟಲಿಲ್ಲ, ಆರರಲ್ಲಿ ತೋರಲಿಲ್ಲ. ಎಂಟರಲ್ಲಿ ಕಂಡುದಿಲ್ಲ, ಒಂದರಲ್ಲಿ ನಿಂದುದಿಲ್ಲ. ಏನೆಂದೆಂಬೆ? ಎಂತೆಂದೆಂಬೆ? ಕಾಯದಲ್ಲಿ ಅಳಿದುದಿಲ್ಲ, ಜೀವದಲ್ಲಿ ಉಳಿದುದಿಲ್ಲ, ಗುಹೇಶ್ವರನೆಂಬ ಲಿಂಗವು ಶಬ್ದಕ್ಕೆ ಬಂದುದಿಲ್ಲ
Transliteration Mūraralli muṭṭalilla, āraralli tōralilla. Eṇṭaralli kaṇḍudilla, ondaralli nindudilla. Ēnendembe? Entendembe? Kāyadalli aḷidudilla, jīvadalli uḷidudilla, guhēśvaranemba liṅgavu śabdakke bandudilla
Music Courtesy:
Hindi Translation तीन में मिला नहीं, छ: में दिखाया नहीं। आठ में देखा नहीं, एक में खड़ा नहीं। क्या कहूँ? कैसे कहूँ? शरीर में नाश नहीं, जीव में बचा नहीं, गुहेश्वरलिंग शब्द में बाँध नहीं सकता। Translated by: Eswara Sharma M and Govindarao B N
Tamil Translation மூன்றைத் தீண்டவில்லை ஆறிலே தோன்றவில்லை, எட்டில் கண்டதில்லை ஒன்றிலேநிற்கவில்லை, என்னென்பேன்? எப்படிஎன்பேன்? உடலிலிருந்து அழிவதில்லை ஜீவனில் எஞ்சுவதில்லை, குஹேசுவரனெனும் இலிங்கம். அதனை விவரிக்கவியலுமோ? Translated by: Smt. Kalyani Venkataraman, Chennai
ಶಬ್ದಾರ್ಥಗಳು ಆರು = ಆರು ಚಕ್ರಗಳು, ಯೋಗಿಯ ಧ್ಯಾನಸ್ಥಾನಂಗಳು; ಎಂಟು = ಎಂಟು ತನುಗಳು; ಒಂದು = ಒಂದು ಎಂದು ಹೇಳುವ ಮಹಾವಾಕ್ಯ; ಮೂರು = ಮೂರು ಅಂಗಗಳು; Written by: Sri Siddeswara Swamiji, Vijayapura