Index   ವಚನ - 216    Search  
 
ನಿರಾಳ ನಿತ್ಯವೆಲ್ಲಾ ಸ್ಥಾನ ಚೆನ್ನಾಯಿತ್ತು. ಎಲ್ಲಾ ಗಣಂಗಳು ಚೆನ್ನಾದರು. ಸಿದ್ಧಗಣ ಮಂದಿರಗಣ ಚೆನ್ನಾಯಿತ್ತು. ತಾಂಡವ ಅಂಡವ ಚೆನ್ನಾಯಿತ್ತು. ತ್ರಿಕಾಂಡವ ಭೂಕಾಂಡವ ಚೆನ್ನಾಯಿತ್ತು. ದೇವಲೋಕ ಮರ್ತ್ಯಲೋಕ ಚೆನ್ನಾಯಿತ್ತು. ದೇವಗಣಂಗಳು ಶಿವಗಣಂಗಳು ಚೆನ್ನಾಯಿತ್ತು. ಮಹಾಲೋಕದ ಮಹಾಗಣಂಗಳು ಚೆನ್ನಾಯಿತ್ತು. ಅತೀತ ಆಚಾರ ಘನ ಚೆನ್ನಾಯಿತ್ತು. ಪ್ರಸಾದ ನಿರವಯ ಜಂಗಮ ಚೆನ್ನಾಯಿತ್ತು. ಗಂಗಾ ಬಸವ ಚೆನ್ನಾಯಿತ್ತು. ಅನಾಗತಮೂರ್ತಿಯಾದ ಆಕಾರವನು ಕರಸ್ಥಲದಲ್ಲಿ ಹಿಡಿದು, ಬೆಳಗಾಗಿರ್ದ ಜ್ಞಾನ ಚೆನ್ನಾಯಿತ್ತು. ಮಾಡಿದ ಎನ್ನನು ಚೆನ್ನ ಮಾಡಿದ, ಕಲಿದೇವಾ, ನಿಮ್ಮ ಶರಣ ಬಸವ ಚೆನ್ನಬಸವನು.