ಬಕಾರವೆ ಗುರುವಯ್ಯಾ, ಸಕಾರವೆ ಲಿಂಗವಯ್ಯಾ,
ವಕಾರವೆ ಜಂಗಮವಯ್ಯಾ, ಅದೆಂತೆಂದಡೆ:
ಬಕಾರಂ ಗುರುರೂಪಂ ಚ ಸಕಾರಂ ಲಿಂಗಮೂರ್ತಿಃ|
ವಕಾರಂ ಚರಮಾಖ್ಯಾತಂ ತ್ರಿವಿಧಂ ತತ್ತ್ವ ನಿಶ್ಚಯಂ||
ಇಂತೆಂದುದಾಗಿ.
ಉದಯ ಮಧ್ಯ ಸಾಯಂಕಾಲದಲ್ಲಿ,
ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆವ
ಮಹಾಮಹಿಮರ ತೋರಾ, ಕಲಿದೇವರದೇವ.
Art
Manuscript
Music
Courtesy:
Transliteration
Bakārave guruvayyā, sakārave liṅgavayyā,
vakārave jaṅgamavayyā, adentendaḍe:
Bakāraṁ gururūpaṁ ca sakāraṁ liṅgamūrtiḥ|
vakāraṁ caramākhyātaṁ trividhaṁ tattva niścayaṁ||
intendudāgi.
Udaya madhya sāyaṅkāladalli,
basavā basavā basavā endu majjanakkereva
mahāmahimara tōrā, kalidēvaradēva.