•  
  •  
  •  
  •  
Index   ವಚನ - 671    Search  
 
ಅಂಗೈಯೊಳಗಣ ನಾರಿವಾಳದ ಸಸಿ, ಅಂಬರದೆರಳೆಯ ನುಂಗಿತ್ತಲ್ಲಯ್ಯಾ. ಕಂಭದೊಳಗಣ ಮಾಣಿಕ್ಯದ ಬಿಂದು ನವಕೋಟಿ ಬ್ರಹ್ಮರ ನುಂಗಿತ್ತಲ್ಲಯ್ಯಾ. ಅಂಡಜವೆಂಬ ತತ್ತಿ ಹಲವು ಪಕ್ಷಿಯ ನುಂಗಿ ನಿರ್ವಯಲಾಗಿತ್ತು ಗುಹೇಶ್ವರಾ!
Transliteration Aṅgaiyoḷagaṇa nārivāḷada sasi, ambaraderaḷeya nuṅgittallayyā. Kambhadoḷagaṇa māṇikyada bindu navakōṭi brahmara nuṅgittallayyā. Aṇḍajavemba tatti halavu pakṣiya nuṅgi nirvayalāgittu guhēśvarā!
Hindi Translation हथेली पर नारियल का पौधा अंबर की वायु को निगला था। खंब के अंदर माणिक्य बिंदु नव कोटि ब्रह्मों को निगला था। ब्रह्म नामक अंडा कई पक्षियों को निगल‌कर निर्वयल‌ हुआ था गुहेश्वरा ! Translated by: Eswara Sharma M and Govindarao B N
Tamil Translation அங்கையிலுள்ள தென்னங்கன்று, ஆகாயத்திலுள்ள வாயுவை விழுங்கியது. கம்பத்திலுள்ள மாணிக்க பிந்து ஒன்பது கோடி பிரம்மரை விழுங்கியது. பிரம்மம் எனும் பாவலிங்கம் பலபறவைகளை விழுங்கி வெட்டவெளியாயிற்று குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗೈ = ಕರಸ್ಥಲ; ಅಂಡಜ = ಬ್ರಹ್ಮ; ಅಂಡಜವೆಂಬ ತತ್ತಿ = ಭಾವದೊಳು ಮೂಡಿದ ಮಹಾಲಿಂಗ, ಭಾವಲಿಂಗ; ಅಂಬರದೆರಳೆ = ಸಂಚಲಶೀಲ ವಾಯು; ಕಂಭ = ದೇಹ; ಕಂಭದೊಳಗು = ದೇಹಾಂತರಂಗ, ಹೃದಯ; ತತ್ತಿ = ಭಾವಗತ ಬ್ರಹ್ಮ, ಭಾವಲಿಂಗ; ನವಕೋಟಿ ಬ್ರಹ್ಮರು = ಅಸಂಖ್ಯವಾದ ಮನೋವೃತ್ತಿಗಳು; ನಾರಿವಾಳದ ಸಸಿ = ಇಷ್ಟವಾದ ಲಿಂಗ; ನುಂಗು = ನಿಶ್ಚಲಗೊಳಿಸು; ನುಂಗು = ಅಡಗಿಸು; ಮಾಣಿಕ್ಯದ ಬಿಂದು = ಸುಶಾಂತವಾಗಿ ಬೆಳಗುವ ಪ್ರಾಣಲಿಂಗ; ಹಲವು ಪಕ್ಷಿ = ವಿಶ್ವ, ತೈಜಸ, ಪ್ರಾಜ್ಞ-ಹೀಗೆ ಹಲವು ರೂಪುಗಳಿಂದ ತೋರುವ ಜೀವಭಾವ; Written by: Sri Siddeswara Swamiji, Vijayapura