ಮನದ ಕೊನೆಯ ಮೊನೆಯ
ಮೇಲೆ ನೆನೆದ ನೆನಹು
ಜನನ ಮರಣವ ನಿಲಿಸಿತ್ತು.
ಜ್ಞಾನಜ್ಯೋತಿಯ ಉದಯ ಭಾನು ಕೋಟಿಯ ಮೀರಿ,
ಸ್ವಾನುಭಾವದ ಉದಯ ಜ್ಞಾನಶೂನ್ಯದಲಡಗಿದ
ಘನವನೇನೆಂಬೆ ಗುಹೇಶ್ವರಾ!
Transliteration Manada koneya moneya
mēle neneda nenahu
janana maraṇava nilisittu.
Jñānajyōtiya udaya bhānu kōṭiya mīri,
svānubhāvada udaya jñānaśūn'yadalaḍagida
ghanavanēnembe guhēśvarā!
Hindi Translation मन के नोक के छोर पर किया याद
जनन मरण को रोका था।
ज्ञान ज्योति का उदय भानु कोटि पारकर,
स्वानुभाव का उदय ज्ञान शून्य में समा गया
घन को क्या कहूँ गुहेश्वरा।
Translated by: Eswara Sharma M and Govindarao B N
Tamil Translation மனத்தின் இறுதிமுனையின்மீது நினைத்த நினைவு
பிறப்பு - இறப்பை அகற்றியது.
ஞானஒளியின் எழுச்சி, ஆயிரம் சூரியரைமீறிட,
தன்னையுணர்ந்த ஞானம், பின்னஞானத்தை அகற்றிய
மேன்மையை என்னென்பேன் குஹேசுவரனே!
Translated by: Smt. Kalyani Venkataraman, Chennai
ಶಬ್ದಾರ್ಥಗಳು ಜ್ಞಾನಜ್ಯೋತಿ = ಜ್ಞಾನಘನಲಿಂಗ; ನಿಲಿಸು = ಅಡಗಿಸು; ನೆನೆದ ನೆನಹು = "ತಾನು ಜೀವನಲ್ಲ, ಲಿಂಗದೇವ" ಎಂಬ ಪವಿತ್ರ ನೆನಹು; ಭಾನುಕೋಟಿ = ಕೋಟಿ ಸೂರ್ಯರು; ಮನದ ಕೊನೆಯ ಮೊನೆ = ಮನೋನ್ಮನಿ ಅವಸ್ಥೆ; ಸ್ವಾನುಭಾವ = ತನ್ನ ನಿಜಸ್ವರೂಪದ ಅನುಭೂತಿ;
Written by: Sri Siddeswara Swamiji, Vijayapura