Index   ವಚನ - 247    Search  
 
ಬಾಲನಹನೊಮ್ಮೆ, ಲೋಲನಹನೊಮ್ಮೆ, ವೃದ್ಧನಹನೊಮ್ಮೆ, ಮತ್ತನಹನೊಮ್ಮೆ, ಹೊಳೆದು ತೋರುತಲೊಮ್ಮೆ ತೋರಿ ಅಡಗುತಲೊಮ್ಮೆ. ವಿಶ್ವವ ನೋಡಿ ಬೆರಗಾಗುತ್ತಮಿರೆ, ಇದ್ದ ಠಾವಿನಲ್ಲಿ ಮುಂದೆ ತೋರುತ್ತವಿರಲು, ಸಂಪ್ರದಾಯದವರು ಒಡನೊಡನೆ ಹರಿದುಬಂದು, ಹೇಳುತ್ತಿರಲು, ಹರಿದು ಬಂದು ಹತ್ತೆಸಾರಿದ, ಬಸವನ ಮಹಾಮನೆಯ ತಲೆಯೆತ್ತಿ ನೋಡಿದ. ಮುಗಿಲ ಮೂಲೆ ತಪ್ಪದೆ ಕುಸುರಿಗೆಲಸಗಳ, ನಂದಿಯ ಮಂಟಪಗಳ, ಮೇಲುಪ್ಪರಿಗೆಯ ಭದ್ರಂಗಳ ನೋಡಿ ತಲೆದೂಗುತ್ತ, ಕಲಿದೇವರದೇವ, ಬಸವನ ಮಹಾಮನೆಯ ಪ್ರದಕ್ಷಿಣ ಬಂದು, ದ್ವಾರದ ಮುಂದೆ ನಿಂದಿರ್ದನು,