Index   ವಚನ - 246    Search  
 
ಬಹುಜಲವಂ ಬಿಟ್ಟು, ಚಿಲುಮೆಯ ತೆರೆಗಡದು. ನೆಲಶುದ್ಧ ಸೌಕರ್ಯವಲ್ಲದೆ ಅದು ಶೀಲವಲ್ಲ. ಉಪ್ಪ ಬಿಟ್ಟು ಸಪ್ಪೆಯನುಂಡಡದು ಮನದ ಹೇಸಿಕೆಯಿಲ್ಲದೆ ಅದು ದೃಢವ್ರತವಲ್ಲ. ವ್ರತ ನಿಶ್ಚಿಯವಾವುದೆಂದಡೆ, ಪರಸ್ತ್ರೀ ಪರಧನ ಪರದೂಷಣೆಯವನರಿದು ಬಿಟ್ಟಡೆ, ಅದು ಅರುವತ್ತಾರುವ್ರತವೆಂದೆ, ಕಲಿದೇವರದೇವ.